
1)ರಾಜ್ಯ ಸರ್ಕಾರದ ಗೃಹಲಕ್ಷ್ಮಿ ಯೋಜನೆ ಶೇಕಡಾ 96.95 ಯಶಸ್ವಿಯಾಗಿದೆ.
2)ಯೋಜನೆಗೆ ನೋಂದಣಿಯಾದ 1.25 ಕೋಟಿ ಮಹಿಳೆಯರಲ್ಲಿ 1.21 ಕೋಟಿ ಮಹಿಳೆಯರಿಗೆ ಹಣ ತಲುಪಿದೆ.
3)ತಾಂತ್ರಿಕ ಸಮಸ್ಯೆಇಂದಾಗಿ ಪೋಸ್ಟಲ್ ಪೇಮೆಂಟ್ ಬ್ಯಾಂಕ್ ನೆರವಿಗೆ ಹೋದ ಇಲಾಖೆ ಅಧಿಕಾರಿಗಳು
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾಗಿರುವ ‘ಗೃಹಲಕ್ಷ್ಮಿ’ ಯೋಜನೆ ಸರ್ಕಾರದ ನಿರೀಕ್ಷೆ ಮೀರಿ ಯಶಸ್ವಿಯಾಗಿದೆ.ಕರ್ನಾಟಕ ರಾಜ್ಯದಲ್ಲಿ ನಿಗಿಪಡಿಸಿದ್ದ ಗುರಿ ಪೈಕಿ ಶೇಕಡಾ 96.95 ಮಹಿಳೆಯರು ಸರ್ಕಾರದಿಂದ ಪ್ರತಿ ತಿಂಗಳಿಗೆ 2000 ರೂ. ಆರ್ಥಿಕ ನೆರವು ಪಡೆಯುತ್ತಿದ್ದಾರೆ.
ಮಹಿಳೆಯರನ್ನು ಆರ್ಥಿಕವಾಗಿ ಸಬಲರನ್ನಾಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ 2023ರಲ್ಲಿ ಜೂನ್ 6ರಂದು ರಾಜ್ಯಾದ್ಯಂತ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೊಳಿಸಿದೆ. ಪಂಚ ಗ್ಯಾರಂಟಿಗಳ ಪೈಕಿ ಇದು ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು . ಇದುವರೆಗೆ ರಾಜ್ಯದಲ್ಲಿ 1.25 ಕೋಟಿ ಮಹಿಳೆಯರು ಈ ಯೋಜನೆ ಅಡಿ ನೋಂದಣಿ ಮಾಡಿಕೊಂಡಿದ್ದು, 1.21 ಕೋಟಿ ಮಹಿಳೆಯರಿಗೆ ಪ್ರತಿ ತಿಂಗಳು ಹಣ (ಕಂತುಗಳಲ್ಲಿ) ಹಣವು ಪಾವತಿಯಾಗುತ್ತಿದೆ.
•ನಾಲ್ಕು ಲಕ್ಷ ಜನರಿಗೆ ಬಾಕಿ
ಯೋಜನೆಗೆ ನೋಂದಣಿ ಮಾಡಿಕೊಳ್ಳಲು ಕಾಲಮಿತಿ ನಿಗದಿಯಾಗಿಲ್ಲ. ಕಾರಣ, ಮಹಿಳೆಯರು ಹೆಸರು ಇನ್ನು ನೋಂದಣಿ ಮಾಡಿಸುತ್ತಲೇ ಇದ್ದಾರೆ. ಈಗಲೂ ಕೆಲ ತಾಂತ್ರಿಕ ಅಡೆತಡೆಗಳಿವೆಯಾದರೂ ಯೋಜನೆ ಆರಂಭದಲ್ಲಿದ್ದಷ್ಟು ಗೊಂದಲ ಇಲ್ಲ. ಆದರೆ ಇಂದಿಗೂ (ಎನ್ಪಿಸಿಐ) ತಾಂತ್ರಿಕ ತೊಡಕು ಆಗಾಗ ಕಾಣಿಸಿಕೊಳ್ಳುತ್ತಾಲ್ಲೆ . ಇದೇ ಕಾರಣಕಾಗಿ ನೋಂದಣಿಯಾದ ನಾಲ್ಕು ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಹಣವು ಡಿಬಿಟಿ ಮೂಲಕ ಪಾವತಿ ಆಗುತ್ತಿಲ್ಲ.
• ತಾಂತ್ರಿಕ ಸಮಸ್ಯೆಗೆ ಹೊಸ ಐಡಿಯಾ
ಹಣ ಪಾವತಿ ಆಗುತ್ತಿಲ್ಲ ಎಂದು ಬರುತ್ತಿರುವ ಮಹಿಳೆಯರಿಗೆ, ಇಂಡಿಯನ್ ಪೋಸ್ಟಲ್ ಬ್ಯಾಂಕ್ ಖಾತೆ ತೆರೆಯುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಿಬ್ಬಂದಿಗಳು , ಅಧಿಕಾರಿಗಳು ಸಲಹೆ ನೀಡುತ್ತಿದ್ದಾರೆ. ಅದರಂತೆ ಪೋಸ್ಟ್ ಬ್ಯಾಂಕ್ ಖಾತೆ ತೆರೆದಿರುವ ಮಹಿಳೆಯರಿಗೆ ಪ್ರತಿ ಕಂತಿನ ಹಣ ತಪ್ಪದೇ ಪಾವತಿ ಆಗುತ್ತಿದೆ. ಪೋಸ್ಟ್ ಬ್ಯಾಂಕ್ ಪರಿಹಾರ ಕಂಡುಕೊಂಡ ಬಳಿಕ ‘ಹಣ ಪಾವತಿ ತೊಡಕು’ ಬಹುತೇಕ ಪರಿಹಾರವಾಗಿದೆ ಎನ್ನುತಿದ್ದರೆ ಇಲಾಖೆಯಾ ಸಿಬ್ಬಂದಿಗಳು.
•ಶೇ 93.67 ನೋಂದಣಿ
ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಎಂದು ಹೆಸರಿಸಿದ ಮಹಿಳೆ ಗೃಹಲಕ್ಷ್ಮಿ ಯೋಜನೆಯಾ ಫಲಾನುಭವಿಯಾಗಲು ಅರ್ಹಳು. ರಾಜ್ಯಾದ್ಯಂತ ಇಂತಹ 1.33 ಕೋಟಿಯಾ ಮನೆ ಯಜಮಾನಿಯರಿದ್ದು, ಅವರನ್ನು ಯೋಜನೆ ವ್ಯಾಪ್ತಿಗೆ ತರುವ ಗುರಿ ಸರ್ಕಾರದ ಮುಂದಿತ್ತು. ಈ ಗೃಹಲಕ್ಷ್ಮಿ ಯೋಜನೆ ಶುರುವಾಗಿ ಸುಮಾರು ಒಂದೂವರೆ ವರ್ಷ ಆಗುವುದರೊಳಗೆ ಶೇ.93.67 ಮಹಿಳೆಯರನ್ನು ಯೋಜನೆಯಾ ವ್ಯಾಪ್ತಿಗೆ ಸೇರಿಸಲಾಗಿರುಹುದು 1.25 ಕೋಟಿ ಮಹಿಳೆಯರು ಗೃಹಲಕ್ಷ್ಮಿಯರಾಗಿ ನೋಂದಣಿಯನ್ನು ಮಾಡಿಕೊಂಡಿದ್ದಾರೆ. ಇದರಲ್ಲಿ ಬರೋಬರಿ 1.21 ಕೋಟಿ ಗೃಹಲಕ್ಷ್ಮಿಯರು ಹಣವನ್ನು ಪಡೆಯುತ್ತಿದ್ದಾರೆ.
•30 ಸಾವಿರ ಕೋಟಿ ಪಾವತಿ
ರಾಜ್ಯದಲ್ಲಿ ಗೃಹಲಕ್ಷ್ಮಿ ಯೋಜನೆ ಆರಂಭ ಆದಾಗಳಿಂದ ಇಲ್ಲಿ ವರೆಗೆ ಒಟ್ಟು 13 ಕಂತುಗಳಲ್ಲಿ 30,285 ಕೋಟಿ ರೂಪಾಯಿ .ಗಳನ್ನು ಫಲಾನುಭವಿಗಳ ಖಾತೆಗೆ ವರ್ಗಾವಣೆ ಮಾಡಿದರೆ . 2024 ರ ಆಗಸ್ಟ್ ತಿಂಗಳವರೆಗಿನ ಹಣ ಪಾವತಿಯಾಗಿದ್ದು , ಸೆಪ್ಟೆಂಬರ್, ಅಕ್ಟೋಬರ್ ತಿಂಗಳ ಕಂತು ಮಾತ್ರ ಬಾಕಿ ಇದೆ ಎಂದು ಅಧಿಕಾರಿಗಳು ಮಾಹಿತಿ ಕೊಟ್ಟಿದಾರೆ . ಹಾಕಿ ಇರುವ ಫಲಾನುಭವಿಗಳ ಸಂಖ್ಯೆಗೆ ಅನುಗುಣವಾಗಿ ಗೃಹಲಕ್ಷ್ಮಿ ಯೋಜನೆಯ ಮಾಸಿಕ ವೆಚ್ಚ 2427 ಕೋಟಿ ರೂಪಾಯಿ..!
• ಯೋಜನೆ ಯಶಸ್ವಿಗೆ ಪಂಚ ಕಾರಣಗಳು
1)ಮಹಿಳೆಯರಿಂದ ಉತ್ತಮವಾದ ಸ್ಪಂದನೆ
2)ಅಂಗನವಾಡಿ ಕಾರ್ಯಕರ್ತೆಯರಿಂದ ಪ್ರಚಾರ
3)ಆರಂಭದಲ್ಲಿದ್ದ ತಾಂತ್ರಿಕ ಸಮಸ್ಯೆಗಳ ನಿವಾರಣೆ
4)KYC ಸರಳವಗಿಸುವ ಪೋಸ್ಟಲ್ ಬ್ಯಾಂಕ್ ಖಾತೆ
5)ನಿಯಮಿತವಾಗಿ ಹಣ ಪಾವತಿಯಾಗುತ್ತಿರುವುದು
ಈಗಲೂ….