
ರಾಜ್ಯ ಸರ್ಕಾರದಿಂದ ವಿದ್ಯಾರ್ಥಿಗಳಿಗೆ ಒಳ್ಳೆಯ ನ್ಯೂಸ್. 2024-25ನೇ ಸಾಲಿನಲ್ಲಿ ಇರುವ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಹಾಗೂ ಮೆಟ್ರಿಕ್ ನಂತರದ ವಿದ್ಯಾರ್ಥಿವೇತನದ ಕಾರ್ಯಕ್ರಮದಡಿ (Prize Money Scholarship) ಅರ್ಹ ವಿದ್ಯಾರ್ಥಿಗಳಿಂದ ಆನ್ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಅರ್ಜಿ ಸಲ್ಲಿಸಬಹುದು.
•ಪ್ರೋತ್ಸಾಹ ಧನ
10th/SSLC ವಾರ್ಷಿಕ ಪರೀಕ್ಷೆಯಲ್ಲಿ ಪ್ರಥಮ ಪ್ರಯತ್ನದಲ್ಲಿ, ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾದ ಪರಿಶಿಷ್ಟ ಜಾತಿಯಾ ವಿದ್ಯಾರ್ಥಿಗಳಿಂದ ಆನ್ ಲೈನ್ ನಲ್ಲಿ ಅರ್ಜಿ ಆಹ್ವಾನಿಸಲಾಗಿದೆ.
• ಮೆಟ್ರಿಕ್ ನಂತರದ ಪ್ರೋತ್ಸಾಹ ಧನ
12th/ಪಿಯುಸಿ ಪಾಲಿಟೆಕ್ನಿಕ್ ಡಿಪ್ಲೋಮಾ, ITI ಸ್ನಾತಕ ಪದವಿ, ಸ್ನಾತಕೋತ್ತರ ಪದವಿ ಕೋರ್ಸುಗಳಲ್ಲಿ ಪ್ರಥಮ ಪ್ರಯತ್ನದಲ್ಲಿನ , ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಜಾತಿಯಾ ವಿದ್ಯಾರ್ಥಿಗಳು ಅರ್ಹರಾಗಿರುತಾರೆ.
• ಆದಾಯ ಮಿತಿ
8ನೇ ತರಗತಿಯಾ ವಿದ್ಯಾರ್ಥಿಗಳ ಕುಟುಂಬದವಾರ ವಾರ್ಷಿಕ ಆದಾಯವು 6 ಲಕ್ಷ ರೂ. ಯಾವುದೇ ಕಾರಣಕ್ಕೂ ಮೀರಿರಬಾರದು.
9-10ನೇ ತರಗತಿಯ ಮೆಟ್ರಿಕ್ ಪೂರ್ವ ವಿದ್ಯಾರ್ಥಿವೇತನ ಹಾಗೂ ಮೆಟ್ರಿಕ್ ನಂತರದಲ್ಲಿನ ವಿದ್ಯಾರ್ಥಿಗಳ ಕುಟುಂಬದವಾರ ವಾರ್ಷಿಕ ಆದಾಯವು 2.5 ಲಕ್ಷ ರೂ. ಮೀರಿರಲೆಬಾರದು.
• SC prize money 2024
1)ಪದವಿ ವಿದ್ಯಾರ್ಥಿಗಳಿಗೆ : 25,000 ರೂಪಾಯಿ.
2)ಯಾವುದೆ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ(ಉದಾ: M.A., M.Sc ಮುಂತಾದ): 30,000 ರೂಪಾಯಿ
3)Agriculture, Engineering, Veterinary, Medicine: 35,000 ರೂಪಾಯಿ
4)ದ್ವೀತಿಯ PUC, ಮೂರು ವರ್ಷದ ಡಿಪ್ಲೋಮಾ: 20,000ರೂ.
•ಆಧಾರ್ ಸೀಡಿಂಗ್
ವಿದ್ಯಾರ್ಥಿವೇತನ ಮತ್ತು ಪ್ರೋತ್ಸಾಹ ಧನ ಕಾರ್ಯಕ್ರಮದಡಿ ಮಂಜೂರಾದ ಮೊತ್ತವನ್ನು ವಿದ್ಯಾರ್ಥಿಗಳ ಆಧಾರ್ ಲಿಂಕ್ ಇರುವ ಬ್ಯಾಂಕ್ ಖಾತೆಗೆ ನೇರವಾಗಿ ಜಮೆ ಮಾಡುತಿದ್ದರೆ , ಸದರಿ ಪ್ರಕ್ರಿಯೆಗೆ ವಿದ್ಯಾರ್ಥಿಯ ಆಧಾರ್ ಸಂಖ್ಯೆಯನ್ನು ವಿದ್ಯಾರ್ಥಿಯ ಬ್ಯಾಂಕ್ ಖಾತೆಗೆ ಲಿಂಕ್ ಮಾಡುವುದು ಕಡ್ಡಾಯಾ .