
ಬನ್ನಿ ನೋಡೋಣ :ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್, ರಾಜ್ಯದಲ್ಲಿನ ಎಲ್ಲ ಪ್ರಾಥಮಿಕ ಹಾಗೂ ಪ್ರೌಢ ಮತ್ತು ಹೈಯರ್ ಸೆಕೆಂಡರಿ ವಿದ್ಯಾರ್ಥಿಗಳಿಗೆ ‘ಆಧಾರ್’ ಸಂಖ್ಯೆಯ ರೂಪದ 12 ಅಂಕಿಯ ‘ಅಪಾರ್’ ವಿಶಿಷ್ಟ ಗುರುತಿನ ಚೀಟಿಯನ್ನು (APAAR ID Card) ವಿತರಿಸಲು ಸರ್ಕಾರ ಸಿದ್ದತೆ ನಡೆಸುತಿದೆ.
ಕೇಂದ್ರ ಶಾಲಾ ಶಿಕ್ಷಣ ಸಚಿವಾಲಯದ ರಾಷ್ಟ್ರೀಯ ಶಿಕ್ಷಣ ನೀತಿ 2020 (NEP) ಯೋಜನೆಯಡಿಯಲ್ಲಿ ವಿದ್ಯಾರ್ಥಿಗಳಿಗೆ ದೇಶದಾದ್ಯಂತ ಏಕರೂಪದ ಗುರುತಿನ ಚೀಟಿಯನ್ನು ನೀಡಲು ‘ಒಂದು ದೇಶ, ಏಕರೂಪದ ವಿದ್ಯಾರ್ಥಿ ಗುರುತಿನ ಚೀಟಿ’ ಶಿಫಾರಸು ಮಾಡಲಾಗುತಿದೆ . ರಾಜ್ಯದಲ್ಲಿನ ಎಲ್ಲಾ ವಿದ್ಯಾರ್ಥಿಗಳಿಗೂ ‘ಅಪಾರ್’ ವಿಶಿಷ್ಟ ಗುರುತಿನ ಚೀಟಿಯನ್ನು ನೀಡಲಾಗುತ್ತದೆ.
ಅಪಾರ್ ಗುರುತಿನ ಚೀಟಿಗೆ ವಿದ್ಯಾರ್ಥಿಗಳ ಹೆಸರು ನೋಂದಣಿ ಮಾಡುವ ಮೊದಲು ಅವರ ಪೋಷಕರ ಒಪ್ಪಿಗೆ ಕಡ್ಡಾಯವಾಗಿರುತ್ತದೆ . ಪೋಷಕರ ಆಧಾರ್, ವೋಟರ್ ಐ.ಡಿ, ಹಾಗೂ ಡ್ರೈವಿಂಗ್ ಲೈಸನ್ಸ್ ಗೆ ಲಿಂಕ್ ಮಾಡಿ ವಿದ್ಯಾರ್ಥಿಗಳ ID ಸೃಷ್ಟಿಸುತ್ತಾರೆ.
ವಿದ್ಯಾರ್ಥಿಗಳ ತಮ್ಮ ಹೆಸರು ನೋಂದಾಯಿ ಸಲು ಶಿಕ್ಷಣ ಇಲಾಖೆ ಆದೇಶ ಹೊರಡಿಸಿದ್ದು, ಶಾಲೆಯ ಮುಖ್ಯ ಶಿಕ್ಷಕರು ಪೋಷಕರಿಗೆ ಸಭೆ ಕರೆದು ಅವರ ಒಪ್ಪಿಗೆಯನ್ನು ಪಡೆಯುವಂತೆ ಸೂಚಿಸಿದೆ.
ನೋಡಿ ಈಗಾಗಲೇ ರಾಜ್ಯದ ಎಲ್ಲಾ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳ ಪೋಷಕರ ಒಪ್ಪಿಗೆಯನ್ನು ಪಡೆಯುವ ಪ್ರಕ್ರಿಯೆ ಆರಂಭಗೊಂಡಿರುತ್ತದೆ .
•APAAR ID CARD ಅಂದರೆ ಏನು..?
ನೋಡಿ ‘ಅಪಾರ್’ ಎಂದರೆ ಇದು ಸ್ವಯಂಚಾಲಿತ ಶಾಶ್ವತ ಶೈಕ್ಷಣಿಕ ಖಾತೆ ನೋಂದಣಿಯಾಗಿದೆ (APAAR-Automatic Permanent Academic Account Registry) ಸಂಕ್ಷಿಪ್ತ ರೂಪವಾಗಿದೆ.
ಆಧಾರ್ ಕಾರ್ಡ್ ಪರಿಕಲ್ಪನೆಯೇ ಇದಕ್ಕೆ ಪ್ರೇರಣೆ. ಆಧಾರ್ ಮಾದರಿ ಅಂತೇ ವಿದ್ಯಾರ್ಥಿಗಳಿಗೂ 12 ಅಂಕಿಗಳ ವಿಶಿಷ್ಟ ಗುರುತಿನ ಚೀಟಿಯನ್ನು ನೀಡುತ್ತಾರೆ . ಇದು ವಿದ್ಯಾರ್ಥಿಗಳ ಜೀವಮಾನದ ಗುರುತಿನ ಸಂಖ್ಯೆಯಾಗಿದೆ .
APAAR ID ಕಾರ್ಡ್ ಎಂದರೆ ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಯಾಣವನ್ನು ಮತ್ತು ಸಾಧನೆಯನ್ನು ಟ್ರ್ಯಾಕ್ ಮಾಡಲು ಮತ್ತು ಒಂದು ಶಾಲೆಯಿಂದ ಇನ್ನೊಂದು ಶಾಲೆಗೆ ವರ್ಗಾವಣೆಯನ್ನು ಸುಲಭಗೊಳಿಸುತ್ತದೆ. ಶಾಲಾ ಹಾಗೂ ಕಾಲೇಜುಗಳು ಪೂರ್ವ ಪ್ರಾಥಮಿಕದಿಂದ ಉನ್ನತ ಶಿಕ್ಷಣದವರೆಗೆ ದಾಖಲಾಗಿರುವ ಪ್ರತಿಯೊಬ್ಬ ವಿದ್ಯಾರ್ಥಿಗೂ ಈ ಕಾರ್ಡ್ ನೀಡಾಲಗುತ್ತೆ .