
Jio New Plan: ಕೈಗೆಟುಕುವ ₹458 ಬೆಲೆಗೆ ಜಿಯೋ ರಿಚಾರ್ಜ್ ಪ್ಲಾನ್ ಘೋಷಣೆ, ಪ್ರಯೋಜನಗಳು.
ಜನವರಿ 24: ಟೆಲಿಕಾಂ ವಲಯದಲ್ಲಿ ಐತಿಹಾಸಿ ಛಾಪು ಮೂಡಿಸಿದ ರಿಲಯನ್ಸ್ ಜಿಯೋ (Jio) ಕಂಪನಿಯು ತನ್ನ ಬಳಕೆದಾರರಿಗೆ ಕಡಿಮೆ ಬೆಲೆಯ ಗ್ರಾಹಕ ಸ್ನೇಹಿ ಮೊಬೈಲ್ ರಿಚಾರ್ಜ್ ಯೋಜನೆ ಜಾರಿಗೆ ತಂದಿದೆ. ಇತ್ತೀಚೆಗೆ ಖಾಸಗಿ ಟಲಿಕಾಂ ಸಂಸ್ಥೆಗಳಾದ ಜಿಯೋ, ಏರ್ಟೆಲ್, ವಡಾಫೋನ್ ಕಂಪನಿಗಳಿಗೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (TRAI) ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಕಡಿಮೆ ಬೆಲೆಯ ಪ್ಲಾನ್ ಘೋಷಿಸುವಂತೆ ನಿರ್ದೇಶಿಸಿತ್ತು. ಇದರ ಬೆನ್ನಲ್ಲೆ ಜಿಯೋ ಕಂಪನಿ ಎಚ್ಚೆತ್ತುಕೊಂಡಿದೆ.
ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿಯು ತನ್ನ ಗ್ರಾಹಕರಿಗೆ ಹೊಸ ಮತ್ತು ಕಡಿಮೆ ಬೆಲೆ ರಿಚಾರ್ಜ್ ಪ್ಲಾನ್ ಘೊಷಿಸಿದೆ. ಇದು ಡೇಟಾ (ಇಂಟರ್ನೆಟ್) ಇಲ್ಲದ ಪ್ಲಾನ್ ಆಗಿದ್ದು, ಕೇವಲ ವಾಯ್ಸ್ ಮತ್ತು SMS ಸೇವೆಗಳನ್ನು ಬಯಸುವ ಗ್ರಾಹಕರಿಗಾಗಿ ಈ ಪ್ಲಾನ್ ಸೂಕ್ತವಾಗಿದೆ ಎಂದು ಕಂಪನಿ ಅಭಿಪ್ರಾಯಪಟ್ಟಿದೆ. ಹಾಗಾದರೆ ಪ್ಲಾನ್ ಬೆಲೆ ಎಷ್ಟು? ವ್ಯಾಲಿಡಿಟಿ, ಪ್ರಯೋಜನ ವಿವರ ಇಲ್ಲಿದೆ.
ಮೊಬೈಲ್ ರಿಚಾರ್ಜ್ ದರ ಏರಿಕೆ ಬೆನ್ನಲ್ಲೆ ಕೇಂದ್ರ ಸರ್ಕಾರಿ ಸುಪರ್ದಿಯಲ್ಲಿರುವ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (BSNL) ಗ್ರಾಹಕರ ಸ್ನೇಹಿ, ಬಜೆಟ್ ಸ್ನೇಹಿ ಯೋಜನೆಗಳನ್ನು ಘೋಷಿಸಲು ಶುರು ಮಾಡಿತು. ಖಾಸಗಿ ಟಿಲಿಕಾಂ ಸಿಮ್ ಬಳಕೆದಾರರು ಬಿಎಸ್ಎನ್ಎಲ್ನತ್ತ ವಾಲಿದರು. ಇದೇ ವೇಳೆಗೆ TRAI ಟೆಲಿಕಾಂ ಕಂಪನಿಗಳಿಗೆ ಕಡಿಮೆ ಬೆಲೆ, ಗ್ರಾಹಕರ ಆದ್ಯತೆ ನೋಡಿಕೊಂಡು ಪ್ಲಾನ್ ಪ್ರಕಟಿಸಲು ಸೂಚಿಸಿತ್ತು.
ಇದರ ಬೆನ್ನಲ್ಲೆ ಎಚ್ಚೆತ್ತ ಜಿಯೋ ಪ್ರತಿ ದಿನ ಹೊಸ ಹೊಸ ಪ್ಲಾನ್ಗಳನ್ನು ಬಿಡುಗಡೆ ಮಾಡುತ್ತಿದೆ. ಅತೀ ಕಡಿಮೆ ದರದಲ್ಲಿ ಬರೋಬ್ಬರಿ 85 ದಿನಗಳ ಅವಧಿಗೆ ಅನಿಯಮಿತ ಕರೆ, ಎಸ್ಎಂಎಸ್, ಮತ್ತು ಧ್ವನಿ ಎಸ್ಎಂಎಸ್ ಸೌಲಭ್ಯ ನೀಡುತ್ತಿದೆ. ಉಳಿದ ಯೋಜನೆಗಳಲ್ಲಿ ಇವು ಸೇರಿ ಡೇಟಾ ಸೌಲಭ್ಯಗಳು ಸಿಗಲಿವೆ. ಈ ಪ್ರಿಪೇಯ್ಡ್ ಪ್ಲಾನ್ ಪಟ್ಟಣ ಮತ್ತು ಗ್ರಾಮೀಣ ಜನರಿಗೂ ಅನುಕೂಲ ಕಲ್ಪಿಸಲಿದೆ.
ಈ 85 ದಿನಗಳ ಯೋಜನೆಗೆ ನೀವು ಕೇವಲ 458 ರೂಪಾಯಿ ಪಾವತಿಸಬೇಕು. ಇದರಿಂದ ನೀವು ಅನ್ಲಿಮಿಟೆಡ್ ಕರೆಗಳು, 1000 ಎಸ್ಎಸ್ಎಂಎಸ್, ವಾಯ್ಸ್ ಎಸ್ಎಂಎಸ್ ಸೌಲಭ್ಯ ಇರಲಿದೆ. ಜಿಯೋ ಆಪ್ಗಳಿಗೆ ಉಚಿತ ಚೆಂದಾದಾರಿಕೆ ಸಿಗಲಿದೆ.
ಜಿಯೋ 01 ವರ್ಷದ ರಿಚಾರ್ಜ್ ಪ್ಲಾನ್
ಇನ್ನೂ ನೀವೇನಾದರೂ ರೂಪಾಯಿ 1958ಗೆ ಪ್ರಿಪೇಯ್ಡ್ ಪ್ಲಾನ್ ಬಯಸಿದರೆ ಒಟ್ಟು 365 ದಿನಗಳ ವಾಯ್ಸ್ ಮತ್ತು ಎಸ್ಎಂಎಸ್ ಪ್ಲಾನ್, ಅನ್ಲಿಮಿಟೆಡ್ ಕರೆಯ ಸೌಲಭ್ಯ ನಿಮ್ಮದಾಗುತ್ತದೆ. ಈ ಪ್ಲಾನ್ನಿಂದ ನಿಮಗೆ ಒಟ್ಟು 3600 ಎಸ್ಎಂಎಸ್, ಜಿಯೋ ಸಂಬಂಧ ಯಾವುದೇ ಮನರಂಜನೆಯ ಆಪ್ಗಳಿದ್ದರೆ ಉಚಿತ ಚೆಂದಾದಾರಿಕೆ ಪಡೆಯಬಹುದಾಗಿದೆ.
ಈ ಪ್ರಿಪೇಯ್ಸ್ ಪ್ಲಾನ್ ಪಡೆದ ಬಳಿಕ ಒಂದು ವೇಳೆ ಡೇಟಾ ಪ್ಲಾನ್ ಖಾಲಿಯಾದರೆ ಎಂದಿನಂತೆ ಇತರ ಹೆಚ್ಚುವರಿ ಪ್ಲಾನ್ ಅವಧಿ ಆಧಾರದಲ್ಲಿ ಜಿಯೋ ಡೇಟಾ ಪ್ಯಾಕ್ ಖರೀದಿಬಹುದು. ಸದ್ಯ ಬಿಎಸ್ಎನ್ಎಲ್ ಬಳಿಕ ಜಿಯೋ ಸಹ ಗ್ರಾಹಕ ಸ್ನೇಹಿ ಪ್ಲಾನ್ ಘೋಷಿಸುತ್ತಿದೆ.