
BPCL Recruitment 2025: ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್
BPCL Recruitment 2025: ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (BPCL) ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಂದ ಜನವರಿ 2025ರ ಅಧಿಕೃತ ಅಧಿಸೂಚನೆಯ ಮೂಲಕ ಈ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಲ್ ಇಂಡಿಯಾ ಸರ್ಕಾರಿ ಉದ್ಯೋಗದ ಹುಡುಕಾಟದಲ್ಲಿರುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತ ಅಭ್ಯರ್ಥಿಗಳು 22-ಫೆಬ್ರವರಿ-2025ರ ಒಳಗೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸಬಹುದು.
ನಾವು ಒದಗಿಸುವ ಎಲ್ಲ ಮಾಹಿತಿಗಳು ನಿಮಗೆ ಇಷ್ಟವಾಗುತ್ತಿದ್ದರೇ ನಾವು ನಿಮಗಾಗಿ ಗ್ರೂಪ್ ಗಳನ್ನೂ ರಚಿಸಿದ್ದು (ಟೆಲಿಗ್ರಾಮ್ ಗ್ರೂಪ್ ಹಾಗೂ ಫೇಸ್ಬುಕ್ ಗ್ರೂಪ್ ) ತಾವು ತಪ್ಪದೆ ಜಾಯಿನ್ ಆಗಿ. ನಾವು ಹಾಕುವ ಎಲ್ಲ ಉದ್ಯೋಗ ಮಾಹಿತಿಯ (Job Updates) ಕೊನೆಯ ಭಾಗದಲ್ಲಿ [ಲೇಖನದ ಕೊನೆಯಲ್ಲಿ] ಅರ್ಜಿ ಸಲ್ಲಿಸಲು ನಿಗದಿಪಡಿಸಿದ ಕೊನೆಯ ದಿನಾಂಕ ಹಾಗೂ ಆರಂಭ ದಿನಾಂಕ ಮತ್ತು ಹುದ್ದೆಗಳಿಗೆ ಸಂಬಂದಿಸಿದ ಅಧಿಸೂಚನೆ ಹಾಗು ಅರ್ಜಿ ಸಲ್ಲಿಸುವ ನೇರ ಲಿಂಕ್ ಅನ್ನು ನೀಡಿರುತ್ತೇವೆ ಸ್ಪಷ್ಟವಾಗಿ ಓದಿ ನಂತರ ಅರ್ಜಿ ಸಲ್ಲಿಸಿ.
ಬಿಪಿಸಿಎಲ್ ಹುದ್ದೆಗಳಿಗೆ ಸಂಬಂಧಿಸಿದ ವಿವರಗಳು
ಸಂಸ್ಥೆಯ ಹೆಸರು
ಭಾರತ್ ಪೆಟ್ರೋಲಿಯಂ ಕಾರ್ಪೊರೇಶನ್ ಲಿಮಿಟೆಡ್ (BPCL)
ಹುದ್ದೆಗಳ ಸಂಖ್ಯೆ
ನಿರ್ದಿಷ್ಟಪಡಿಸಲಾಗಿಲ್ಲ
ಕೆಲಸದ ಸ್ಥಳ
ಆಲ್ ಇಂಡಿಯಾ
ಹುದ್ದೆಗಳ ಹೆಸರು
ಜೂನಿಯರ್ ಎಕ್ಸಿಕ್ಯೂಟಿವ್, ಸೆಕ್ರಟರಿ
ವೇತನ ಶ್ರೇಣಿ
ರೂ. 30,000-1,20,000/- ಪ್ರತಿ ತಿಂಗಳು
BPCL Recruitment 2025-ಅರ್ಹತೆಯ ವಿವರಗಳು
ಹುದ್ದೆಯ ಹೆಸರು ಅರ್ಹತೆ
ಜೂನಿಯರ್ ಎಕ್ಸಿಕ್ಯೂಟಿವ್ (ಕ್ವಾಲಿಟಿ ಅಶ್ಯೂರೆನ್ಸ್) ಡಿಪ್ಲೋಮಾ ರಾಸಾಯನಿಕ ಎಂಜಿನಿಯರಿಂಗ್, ಬಿ.ಎಸ್ಸಿ
ಸೆಕ್ರಟರಿ 10ನೇ ತರಗತಿ, 12ನೇ ತರಗತಿ, ಡಿಪ್ಲೋಮಾ, ಡಿಗ್ರಿ.
ವಯೋಮಿತಿ:
01-ಜನವರಿ-2025ರ ಅನ್ವಯ, ಅಭ್ಯರ್ಥಿಯ ಗರಿಷ್ಠ ವಯಸ್ಸು 29 ವರ್ಷವಾಗಿರಬೇಕು.
ವಯೋಮಿತಿಯಲ್ಲಿ ಸಡಿಲಿಕೆ:
ವರ್ಗ ವಯೋಮಿತಿಯಲ್ಲಿ ಸಡಿಲಿಕೆ
ಓಬಿಸಿ (NCL) 03 ವರ್ಷ
ಎಸ್ಸಿ/ಎಸ್ಟಿ 05 ವರ್ಷ
PwBD 10 ವರ್ಷ
ಅರ್ಜಿ ಶುಲ್ಕ
ಎಸ್ಸಿ/ಎಸ್ಟಿ ಮತ್ತು PwBD ಇಲ್ಲ
ಯುಆರ್/ಓಬಿಸಿ/EWS ರೂ. 1180/-
ಶುಲ್ಕ ಪಾವತಿ ವಿಧಾನ: ಆನ್ಲೈನ್ ಮೂಲಕ.
ಆಯ್ಕೆ ಪ್ರಕ್ರಿಯೆ
ಲಿಖಿತ/ಕಂಪ್ಯೂಟರ್ ಆಧಾರಿತ ಪರೀಕ್ಷೆ
ಕೇಸ್ ಆಧಾರಿತ ಚರ್ಚೆ
ಗುಂಪು ಕಾರ್ಯ
ವೈಯಕ್ತಿಕ ಸಂದರ್ಶನ
ಅರ್ಜಿ ಸಲ್ಲಿಸುವ ವಿಧಾನ
ಬಿಪಿಸಿಎಲ್ ನೇಮಕಾತಿ 2025 ಅಧಿಸೂಚನೆಯನ್ನು ಸಂಪೂರ್ಣವಾಗಿ ಓದಿ: ಅಭ್ಯರ್ಥಿ ಅರ್ಹತಾ ಮಾನದಂಡಗಳನ್ನು ಪೂರೈಸುವ ಕುರಿತು ಖಚಿತಪಡಿಸಿಕೊಳ್ಳಿ (ಕೆಳಗೆ ಕೊಟ್ಟಿರುವ ಲಿಂಕ್ ನೋಡಿ).
ಆನ್ಲೈನ್ ಅರ್ಜಿ ಶುರು ಮಾಡಲು: ಸರಿಯಾದ ಇಮೇಲ್ ಐಡಿಯನ್ನು ಹೊಂದಿರಿಸಿ ಮತ್ತು ಅಗತ್ಯ ದಾಖಲೆಗಳು (ಐಡಿ ಪ್ರೂಫ್, ವಯಸ್ಸಿನ ಪ್ರಮಾಣ, ಶೈಕ್ಷಣಿಕ ಅರ್ಹತೆ, ರೆಸ್ಯೂಮ್ ಇತ್ಯಾದಿ) ಸಿದ್ಧವಾಗಿರಲಿ.
ಅರ್ಜಿ ಫಾರ್ಮ್ ಭರ್ತಿ ಮಾಡಿ: ಅಗತ್ಯವಾದ ಎಲ್ಲಾ ವಿವರಗಳನ್ನು ಪೂರೈಸಿ, ಸ್ಕ್ಯಾನ್ ಮಾಡಿದ ಪ್ರಮಾಣಪತ್ರಗಳು ಮತ್ತು ಇತ್ತೀಚಿನ ಫೋಟೊ ಅಪ್ಲೋಡ್ ಮಾಡಿ.
ಅರ್ಜಿ ಶುಲ್ಕ ಪಾವತಿಸಿ: (ಅಗತ್ಯವಿದ್ದರೆ ಮಾತ್ರ).
ಅರ್ಜಿ ಸಲ್ಲಿಸಿ: ಪ್ರಕ್ರಿಯೆ ಪೂರ್ಣಗೊಳಿಸಲು “ಸಬ್ಮಿಟ್” ಬಟನ್ ಕ್ಲಿಕ್ ಮಾಡಿ. ಆಮೇಲೆ, ಅರ್ಜಿಯ ಸಂಖ್ಯೆ ಅಥವಾ ರಿಕ್ವೆಸ್ಟ್ ಸಂಖ್ಯೆಯನ್ನು ಭದ್ರವಾಗಿಟ್ಟುಕೊಳ್ಳಿ.
BPCL Recruitment 2025-ಪ್ರಮುಖ ದಿನಾಂಕಗಳು
ಅರ್ಜಿ ಸಲ್ಲಿಸುವ ಪ್ರಾರಂಭ ದಿನಾಂಕ :22-01-2025
ಅರ್ಜಿ ಸಲ್ಲಿಸುವ ಮತ್ತು ಶುಲ್ಕ ಪಾವತಿಸುವ ಕೊನೆಯ ದಿನಾಂಕ:22-02-2025
ಇಲ್ಲಿ ಕ್ಲಿಕ್ ಮಾಡಿ
http://bharatpetroleum.com/