
ನಮಸ್ಕಾರ ಸ್ನೇಹಿತರೆ
ಸುಕನ್ಯಾ ಸಮೃದ್ಧಿ ಯೋಜನೆ (SSY) ಭಾರತ ಸರ್ಕಾರವು ನೀಡುವ ರಾಷ್ಟ್ರೀಯ ಉಳಿತಾಯ ಯೋಜನೆಗಳಲ್ಲಿ ಒಂದಾಗಿರುತ್ತದೆ. ಈ ಸಣ್ಣದಾದ ಠೇವಣಿ ಯೋಜನೆಯನ್ನು ವಿಶೇಷವಾಗಿ ಹೆಣ್ಣು ಮಗುವಿನ ಭವಿಷ್ಯವನ್ನು ಭದ್ರಪಡಿಸಲು ಈ ಸುಕನ್ಯಾ ಸಮೃದ್ಧಿ ಯೋಜನೆಯನ್ನು ಮಾಡಿದ್ದಾರೆ . ಇದೀಗ ಈ ಯೋಜನೆಯಲ್ಲಿ ಹೂಡಿಕೆಯು ಅತಿ ಹೆಚ್ಚು ಇದ್ದು, ಮನೆಯ ಹೆಣ್ಣು ಮಕ್ಕಳ (girl child) ಪೋಷಕರ ಖಾತೆಗೆ ಬಹಳಷ್ಟು ಹಣ ಜಮಾ ಆಗಲಿದೆ.
•14 ಲಕ್ಷ ರುಪಾಯಿಗಳ ಬಡ್ಡಿಯನ್ನು ಪಡೆಯಬಹುದು ಸುಕನ್ಯ ಸಮೃದ್ಧಿ ಯೋಜನೆಯಲ್ಲಿ:
ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ, ಪ್ರತಿ ಮನೆಯ ಹೆಣ್ಣು ಮಕ್ಕಳ ಪೋಷಕರು 8.2% ದರದಲ್ಲಿ ಬಡ್ಡಿಯನ್ನು (interest) ಗಳಿಸಬಹುದಾಗಿದೆ . ₹48,000 ರೂಪಾಯಿ ಹೂಡಿಕೆಯಿಂದ 14 ಲಕ್ಷ ರೂ.ಗಳ ಬಡ್ಡಿಯನ್ನು ಗಳಿಸಬಹುದು. ಈ ಒಂದು ಯೋಜನೆಯು ಹೆಣ್ಣು ಮಕ್ಕಳ ಕಲಿಕೆ, ವಿದ್ಯಾಭ್ಯಾಸ ಹಾಗೂ ಅವರ ಜೀವನ ರೂಪಿಸಿಕೊಳ್ಳಲು ತುಂಬಾ ಸಹಾಯವಾಗುತ್ತದೆ.
•ಬಡ್ಡಿ ದರ ಹಾಗೂ ಈ ಯೋಜನೆಯ ಖಾತೆಯ ಅವಧಿ:
ಕೇಂದ್ರ ಸರ್ಕಾರ ರೂಪಿಸಿರುವ ಈ ಒಂದು ಯೋಜನೆಯು ಹೆಣ್ಣು ಮಕ್ಕಳ ಅಭಿವೃದ್ಧಿಗೆ ಬಹಳ ಉಪಯೋಗವಾಗಿರುತ್ತದೆ. ಇದೀಗ ಸುಕನ್ಯಾ ಸಮೃದ್ಧಿ ಯೋಜನೆಯಲ್ಲಿ ನೀಡುತ್ತಿರುವ ಬಡ್ಡಿ ದರವನ್ನು ಹೆಚ್ಚಾಗಿದ್ದು, ಈ ಹಿಂದೆ ಗ್ರಾಹಕರಿಗೆ ಯೋಜನೆಯಲ್ಲಿ ಹೂಡಿಕೆಯ ಮೇಲೆ 8% ದರದಲ್ಲಿ ಬಡ್ಡಿಯನ್ನು ನೀಡಲಾಗುತ್ತಿತ್ತು. ಆದರೆ, ಬಡ್ಡಿದರ ಹೆಚ್ಚಳದ ನಂತರ ಈಗ ಅದನ್ನು ಶೇ.8.2ಕ್ಕೆ ಹೆಚ್ಚು ಮಾಡಿದ್ದಾರೆ. ಯೋಜನೆಯ ವಿಶೇಷವೇನೆಂದರೆ ದೀರ್ಘಾವಧಿಯ ಹೂಡಿಕೆಯಿಂದಾಗಿ, ಈ ಯೋಜನೆಯು ದೊಡ್ಡ ನಿಧಿಯನ್ನು ಹೊಂದಿರುತ್ತದೆ. ಮುಖ್ಯ ವಿಷಯವೇನೆಂದರೆ ಹೆಣ್ಣು ಮಗಳು 10 ವರ್ಷ ವಯಸ್ಸಿನವರೆಗೆ ಮಾತ್ರ ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಖಾತೆಯನ್ನು ತೆಗೆಯಬಹುದು.
• ಈ ಯೋಜನೆಯಲ್ಲಿ ಹೂಡಿಕೆ ಮಾಡಿದ ಮೊತ್ತವನ್ನು ಯಾವ ಸಮಯದಲ್ಲಿ ಹಿಂಪಡೆಯಬಹುದು.?
ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಖಾತೆಗೆ ಜಮಾ ಮಾಡಿದ ಹಣವು 21 ವರ್ಷಗಳಲ್ಲಿ ದೊರೆಯುತ್ತದೆ. ಹಾಗೆಯೇ ಹೆಣ್ಣು ಮಗಳಿಗೆ 18 ವರ್ಷ ಆದಾಗ, ಅಧ್ಯಯನ ಅಥವಾ ಮದುವೆಗಾಗಿ ಖಾತೆಯಿಂದ ಮೊತ್ತವನ್ನು ನೀವು ಹಿಂಪಡೆಯಬಹುದು. ಇನ್ನೊಂದು ಮುಖ್ಯವಾದ ವಿಚಾರವೆಂದರೆ, ಈ ಯೋಜನೆಯಲ್ಲಿ ಪ್ರತಿ ತಿಂಗಳು (every month) 4 ಸಾವಿರ ರೂಪಾಯಿಗಳನ್ನು ಸುಕನ್ಯ ಸಮೃದ್ಧಿ ಯೋಜನೆಯ ಖಾತೆಗೆ ಹಾಕಬೇಕಾಗುತ್ತೆ.
ಖಾತೆಯ ಮುಕ್ತಾಯದ ಅವಧಿ 21 ವರ್ಷಗಳು ಆಗಿರುತ್ತದೆ. ನೀವೇನಾದರೂ, 2024 ರಲ್ಲಿ ಹೂಡಿಕೆ ಮಾಡಲು ಪ್ರಾರಂಭ ಮಾಡಿದರೆ, 2045 ರಲ್ಲಿ ಬಲವಾದ ಆದಾಯವನ್ನು ಪಡೆಯಬಹುದಾಗಿದೆ. ಮತ್ತು ಪ್ರತಿ ತಿಂಗಳು ರೂ. 4,000 ಉಳಿಸಿದರೆ, ಒಂದು ವರ್ಷದಲ್ಲಿ ನೀವು 48,000 ಉಳಿಸದಂತಾಗುತ್ತದೆ. 15 ವರ್ಷಗಳವರೆಗೆ ಖಾತೆಗೆ ಹಣ ಜಮಾ ಮಾಡಬೇಕು. ಲೆಕ್ಕಾಚಾರದ ಪ್ರಕಾರ, 2042 ರ ವರೆಗೆ ಈ ಹೂಡಿಕೆಯನ್ನು ನೀವು ಮಾಡಬೇಕಾಗುತ್ತದೆ.