
ನಮಸ್ಕಾರ ಸ್ನೇಹಿತರೆ : ರಾಜ್ಯದ ಭೂಮಾಪನ ಕಂದಾಯ ವ್ಯವಸ್ಥೆ ಹಾಗೂ ಭೂದಾಖಲೆಗಳ ಇಲಾಖೆಯಲ್ಲಿ ಖಾಲಿ ಇರುವಂತಹ (ಗ್ರೂಪ್ ಸಿ )ಹುದ್ದೆಗಳಾದ “ಭೂಮಾಪಕಾರ” ಹುದ್ದೆಗಳನ್ನು ನೇಮಕಾತಿ ಮಾಡಿಕೊಳ್ಳಲು ಫೆಬ್ರುವರಿ ತಿಂಗಳಿನಲ್ಲಿಯೇ ಅಧಿಸೂಚನೆಯನ್ನು ಹೊರಡಿಸಲಾಗಿತ್ತು. ಈ ಒಂದು ಅಧಿಸೂಚನೆಗಳಲ್ಲಿ 364 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳುವುದಾಗಿ ತಿಳಿಸಿದ್ದರೆ.
ಈ ಹಿಂದೆ ವಯೋಮಿತಿ ಕಾರಣದಿಂದಾಗಿ ಮತ್ತು ತಾಂತ್ರಿಕ ಸಮಸ್ಯೆಗಳಿಂದಾಗಿ ಅರ್ಜಿ ಸಲ್ಲಿಸಲಾಗದ ಅಭ್ಯರ್ಥಿಗಳಿಗಾಗಿ ಅರ್ಜಿ ಸಲ್ಲಿಸಲು ಮತ್ತೊಂದು ಅವಕಾಶ ನೀಡಿ ಹೊಸ ಅಧಿಸೂಚನೆ ಹೊರಡಿಸಲಾಗಿದೆ. ಮತ್ತೆ ಹೆಚ್ಚುವಾರಿಯಾಗಿ ಅದರ ಜೊತೆಗೆ 386 ಹುದ್ದೆಗಳ ನೇಮಕಾತಿ ಮಾಡಿಕೊಳ್ಳುವುದಾಗಿ ಅಧಿಸೂಚನೆ ನೀಡಲಾಗಿದೆ.
ಈ ಮೊದಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳು ಈಗ ಮತ್ತೊಮ್ಮೆ ಅರ್ಜಿ ಸಲ್ಲಿಸುವಂತ ಅವಶ್ಯಕತೆ ಇರುವುದಿಲ್ಲ. ಹಾಗಿದ್ದರೆ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಏನು ಅರ್ಹತೆಗಳನ್ನು ಹೊಂದಿರಬೇಕು ಮತ್ತು ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಯಾವಾಗ ಎಂಬ ಮಾಹಿತಿ ಕೆಳಗೆ ನೀಡಲಾಗಿದೆ👇🏻..
• ಅರ್ಹತೆಗಳು
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುತ್ತಿರುವ ಅಭ್ಯರ್ಥಿಗಳು ವಿಜ್ಞಾನ ವಿಷಯದಲ್ಲಿ ದ್ವಿತೀಯ ಪಿಯುಸಿ ಉತ್ತೀರಣರಾಗಿರಬೇಕು( ಪಾಸಾಗಿರಬೇಕು). ಅದರಲ್ಲಿ ಪ್ರಮುಖವಾಗಿ ಗಣಿತ ವಿಷಯದಲ್ಲಿ 60% ಗಿಂತ ಹೆಚ್ಚಿನ ಅಂಕ ಪಡೆದುಕೊಂಡಿರಬೇಕು.
ಅಥವಾ
ಮಾನ್ಯತೆ ಪಡೆದುಕೊಂಡಿರುವ ಯಾವುದಾದರೂ ವಿಶ್ವವಿದ್ಯಾಲಯದಿಂದ ಸಿವಿಲ್ ವಿಭಾಗದಲ್ಲಿ ಇಂಜಿನಿಯರಿಂಗ್ ಪದವಿ ಮುಗಿಸಿರಲೇಬೇಕು.
• ಅರ್ಜಿ ಸಲ್ಲಿಸುವ ದಿನಾಂಕ
25-11-2025 ರಿಂದ ಡಿಸೆಂಬರ್ 9′ 2024ರ ಒಳಗಾಗಿ ಅರ್ಜಿ ಸಲ್ಲಿಸಬೇಕು
ಅರ್ಜಿ ಸಲ್ಲಿಸಲು ಅರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳು ಕರ್ನಾಟಕ ಪಬ್ಲಿಕ್ ಸರ್ವಿಸ್ ಕಮಿಷನ್ ನ ಅಧಿಕೃತ ಜಾಲತಾಣಕ್ಕೆ ನೀವು ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
•KPSC ಅಧಿಕೃತ ಜಾಲತಾಣದಲ್ಲಿ ಸಲ್ಲಿಸಬೇಕು.
https://kpsconline.karnataka.gov.in/login/login